ಹೀಗೊಂದು ಭಾವ ಚಿತ್ತ ಯಾನ

....

ಗುರುವಾರ, ಡಿಸೆಂಬರ್ 21, 2017

ಭಾವ ಚಿತ್ತ ೨

(ನಾ ಬರೆದ ಈ ಕಿರುಗತೆಗೆಯಲ್ಲಿನ ಒಂದು ಪಾತ್ರಕ್ಕೆ ನನ್ನ ಹೆಸರಿನೊಂದಿಗೆ ಓದಿ)

ಗೆಳೆಯ: ಹಾಯ್ ಗೆಳೆಯಾ... ಹೇಗಿದೀಯೋ.. ನಿನ್ನ ಮೀಟ್ ಆಗಿ ಎಷ್ಟು ವರ್ಷ ಆಯ್ತಲ್ಲೋ ಮತ್ತೇನಪ್ಪ ಸಮಾಚಾರ...?

ವಿನು: ಹಾ... ಇದ್ದಿದ್ದೇ ಲೈಫು ಕೆಲ್ಸಾ... ಅಂತ ಕಾರ್ಯನಿರತನಾಗಿದ್ದೆ.
ನೀವೆಲ್ಲಾ ಹೇಗಿದ್ದೀರೋ..?
ಗೆಳೆಯ: ಹ್ಮ್..
ನಾವೆಲ್ಲ ಸೂಪರ್..

ವಿನು: ನಾನಿರುವ ಕಡೆ ಕನ್ನಡ ನ್ಯೂಸ್ ಚಾನಲ್ಲೇ ಬರಲ್ಲ ಮಿತ್ರಾ.. ತುಂಬಾ ದಿನಾ ಆಯ್ತು ಕನ್ನಡಾನ ಕೇಳ್ದೆ.. ಒಂದೊಳ್ಳೋ ನ್ಯೂಸ್ ಚಾನಲ್ ಹಾಕು..

ಗೆಳೆಯ: ಹಾಕ್ತೀನಿ ಇರೋ ಮಿತ್ರಾ...
ಮುಖ್ಯಾಂಶ... "ನಡುರೋಡಲ್ಲಿ ಅತ್ಯಾಚಾರ"
ವಿನು: ಬರೀ ಇದೆ ಆಯ್ತಲ್ಲೋ
ಗೆಳೆಯ: ಮಿತ್ರ..
ಎಲ್ಲೆ ನೋಡಿದ್ರು ಹುಡ್ಗೀರು ಶಾರ್ಟ್ಸ್ ಮಿನಿ ಅಂತೆಲ್ಲ ಹಾಕೊಂಡು ಪೋಸ್ ಕೊಟ್ರೆ ಇದಲ್ದೆ ಮತ್ತಿನ್ನೇನೋ ಆಗತ್ತೆ?

ವಿನು: ಲೋ ನಿಖರವಾಗಿ ಅದು ವಿಷಯ ಅಲ್ಲ. ನೀವೆಲ್ಲ ಹೀಗೆ ಅಂದು ಅಂದು ಯಾವ ಹೆಣ್ಮಕ್ಕಳುನು ತನ್ ಪಾಡಿಗೆ ಇರಕ್ಕೆ ಬಿಡಲ್ಲವಲ್ಲೋ..
ಈ ಸಮಾಜ ಹೇಗೆ ಅಂದ್ರೆ ತಮ್ಮನೇಲಿ ಹೆಂಗಿದ್ರು ನಡಿಯತ್ತೆ ಆದರೆ ರೋಡಲ್ಲಿರೋ ಹೆಣ್ಮಕ್ಕಳನ್ನ ನೋಡೋ ಕಣ್ಣು ಸರಿ ಇರಲ್ಲ ಕಣೋ..

ಗೆಳೆಯ: ಏನೋ ಹಾಗಂದ್ರೆ..?
ವಿನು: ಮಿತ್ರಾ ತಪ್ಪು ತಿಳಿಬೇಡ..
ಈಗ ನಿಮ್ ಮನೇಲಿ ತಂಗಿ ಅಥವಾ ಹೆಣ್ಣು ಮಕ್ಕಳು ಚಿಕ್ಕ ಚಿಕ್ಕ ಬಟ್ಟೇಲಿ ಕಣ್ಮುಂದೆ ಓಡಾಡಿದ್ರೆ ಏನಾದರು ಮಾಡಿಬಿಡೋಣ ಅಂತ ದುರಾಲೋಚನೆ ಬರುತ್ತಾ..?

ಗೆಳೆಯ: ಲೋ ಮಿತ್ರಾ.ಅದು ಹೇಗೋ ಕೆಟ್ ಯೋಚನೆ..
ಅದು ನಮ್ಮನೆ ಹೆಣ್ಣುಮಕ್ಕಳು..😓😓
ವಿನು: ಆ ದುರಾಲೋಚನೆ ಬರಲ್ಲ ಕಣೋ... ಯಾಕಂದ್ರೆ ಅವು ನಮ್ ಮನೆ ಹೆಣ್ಮಕ್ಕಳು.

ಅದೇ ಬೇರೆ ಮನೆ ಹೆಣ್ಮಕ್ಕಳು ಚಿಕ್ ಬಟ್ಟೇಲಿ ಬಂದ್ರೆ ಈ ಸಮಾಜ ನೋಡೋ ದೃಷ್ಠಿನೇ ಬೇರೆ...
ಯಾಕೆ ಅವ್ರಿಗು ಮನೇಲಿ ಅಪ್ಪ ಅಮ್ಮ ಇರಲ್ವಾ..?

ಅವರು ಇವರನ್ನ ಜೋಪಾನ ಮಾಡಿರಲ್ವಾ..?
ಬೇರೆಯವರ ಮನೆ ಹೆಣ್ಣುಮಕ್ಕಳಿಗೆ ಏನಾದರೂ ಆದ್ರೆ ಮನೇಲಿ ಎಷ್ಟು ನೋವು ಪಡ್ತಾರೆ ಅಂತ ಗೊತ್ತಿರಲ್ವಾ..?
ನಮ್ಮನೆ ಹೆಣ್ಣು ಮಕ್ಕಳು ಮತ್ತೂ ಬೇರೆ ಮನೆ ಹೆಣ್ಣುಮಕ್ಕಳು ಒಂದೇ ಅನ್ನೋ ಗುಣ ಎಲ್ಲರಲ್ಲೂ ಬಂದಾಗ ಈ ಅತ್ಯಾಚಾರ, ಕೊಲೆಗಳು ನಿಲ್ಲತ್ತೆ ಕಣೋ..

ಆಗ ಮಾತ್ರ ಎಲ್ಲಾ ಕಡೆ ಹೆಣ್ಣುಮಕ್ಕಳು ಬೆಳಿಯಲಿಕ್ಕೆ ಸಾಧ್ಯವಾಗಿ ಅವರು ಸಹ ಸ್ವತಂತ್ರವಾಗಿ ಬದುಕೋದಕ್ಕೆ ಆಗೋದು..

ಗೆಳೆಯ: ಹೌದು ಮಿತ್ರಾ.. ನೀನೇಳಿದ್ದು 100% ರೈಟ್ ಕಣೋ... ನೀನು ಇವತ್ತು ನನ್ನ ಕಣ್  ತೆರಿಸ್ದೆ ಮಿತ್ರಾ..

ಈ ಮ್ಯಾಟರ್ ನಾ ನನ್ನೆಲ್ಲ ಪಡ್ಡೆ & ಪೋಲಿ ಗೆಳೆಯರಿಗೆ ಹೇಳ್ತೀನೋ..
ವಿನು: ಹಹಹಹಹ... ಡವ್ ಸಾಕು ಮಿತ್ರಾ...

ಹ್ಮ್ ಹೋಗು ಧೂಳ್ ಎಬ್ಬಿಸು. ಶುಭವಾಗಲಿ. ನನ್ನ ಆಶಿರ್ವಾದ ಯಾವಾಗ್ಲೂ ನಿನ್ನ ಮೇಲಿರತ್ತೆ..
ಗೆಳೆಯ: ಹಹಹ... ಸರಿ ಮಿತ್ರಾ...
★★★★★ಶುಭಂ★★★★★

ಬುಧವಾರ, ಡಿಸೆಂಬರ್ 20, 2017

ಭಾವ ಚಿತ್ತ ೧


ಏನಬೇ ಅಡಿಗಿ ಗಿಡಗಿ ಮಾಡಿ ಇಲ್ಲೋ.
ಇಲ್ಲಾಂದ್ರ ಇವತ್ತೂ ನೀರ ಗತಿ ಅನ್ನು...?
ಈಗ ಬಂದೇನಪಾ..
ಮಾಡೀನಿ ಬಾ ಮಗನ...

ಹೌದಾ ಏನೇನ ಮಾಡಿ ಲಗುಲಗು ಹೇಳ್ ನೋಡೂನು ಅಂದಾಗ
ಅವನ ಅವ್ವ ಹೇಳಿದ್ದು ಹಿಂಗಿತ್ತು...

ನಿನ್ನ ಸಲುವಾಗಿ ನನ್ನ ಭಾವನೆಗೋಳನ್ನ ಹದಾಮಾಡಿ ಹಾಕಿ ತಿರುವಿ ಮುಂಜಾನಿಗೆ ಉಪ್ಪಿಟ ಮಾಡಿಟ್ಟೀನಪಾ...

ನಿಮ್ಮಪ್ಪ ದನದಂಗ ದುಡದ್ ತಂದ ಅವಮಾನಗೋಳನ್ನ ಸಣ್ಣ ಸಣ್ಣಕ ಹೆಚ್ಚಿ ಅದರ ಜೋಡಿ ನನ್ನ ಎರಡ್ಮಾತಿನ ಭರವಸೆಗೋಳನ್ನ ಹಾಕಿ ಸಾರ ಮಾಡಿಟ್ಟೀನಿ...

ಕೆಲಸಕ್ ಹೋದ ನಿನ್ನಕ್ಕ ಹೊತಗೊಂಡ್ ತಂದ ಕೇಳಲಾರದಂತ ಕೆಟ್ ಪದಗೋಳು, ದಾರಿತುಂಬ ಉಡಾಳ ಹುಡುಗೂರು ಕೊಟ್ಟ ಹೀಯಾಳಿಕೆಯ ಬಹುಮಾನಗೋಳು ಇವನ್ನೆಲ್ಲ ಜಜ್ಜಿ ಕುಟ್ಟಿ ತೇದು ಅರದು ಚಟ್ನಿ ಮಾಡೀನಿ...

ಮನಿ ಮನಿ ತಿರಗಿ, ಕೇಳಿ ತಂದಿಟ್ಟ ಬೈಗುಳಗೋಳನ್ನೆಲ್ಲ ಬಸದು, ನೆನಪಿನ ಒಲಿಮ್ಯಾಲಿಟ್ಟು, ನನ್ನ ಕಣ್ಣೀರನ್ನ ರುಚಿಗೆ ಬೇಕಾಗುವಷ್ಟು ಸುರಸಿ ಅನ್ನ ಮಾಡೀನಿ...

ಒಳಗಿನ ನೆನಪಗೋಳನ್ನ ಹೊರಗಿನ ಒಲಿಮ್ಯಾಗ ಹುರದು, ನೆಪದ ಮಸಾಲಿ ಹಾಕಿ ಘಮ ಘಮ ಅನ್ನುವಂಗ ಪಲ್ಲೆ ಮಾಡೀನಿ...

ಕಾಸಗಲದ ಆಶೆಗೋಳನ್ನ ಹೊಡದು ಹುಡಿಮಾಡಿ, ರುಬ್ಬಿ ಪುಡಿಮಾಡಿ, ಕಲ್ಲಾಗ ಹಾಕಿ ಹಿಟ್ಟಮಾಡಿ ಗಟ್ಟೆಂಗ ರೊಟ್ಟಿ ಮಾಡಿ ಅಟ್ಟದಮ್ಯಾಲ ಇಟ್ಟೀನಿ...

ಕುಂದರ ಬಾ ಮಗನ ಬಾಳೆ ಅನ್ನು ತಾಟಿನ್ಯಾಗ ಎಲ್ಲಾ ಜೋಡಿಸು, ಊಟಕ್ಕ ನೀಡ್ತೀನಿ, ಅಡಿಗ್ಯಾಗ ಸ್ವಲ್ಪ ಉಪ್ಪ ಹೆಚ್ಚಾದ್ರ ತಡಕೊಂಡ ತಿನ್ನಪಾ...
ಯಾಕಂದ್ರ ಇವತ್ತು ಎಂಟ್ ಹನಿ ಕಣ್ಣೀರು. ಮೂರ್ ಹನಿ ಬೆವರು ಜಾಸ್ತಿ ಆಗೆದ...

ಇದನ್ನ ಕೇಳಿದ ಮಗಾ ಸಪ್ಪಗ ಮಾರಿ ಮಾಡ್ಕೊಂಡ್ ಗಟಾಗಟಾ ಯಾಡ್ ವಾಟಗಾ ನೀರ್ ಕುಡದು ಮತ್ತ
ಗಪ್ಪ ಆಟಕ್ಕೋದಾ...!!!